
ಮುಂಜಾನೆಯ ತುಂತುರು ಮಳೆಯಲಿ,
ಹಸಿರ ಚುಂಬಿಸಿದ ಸೋನೆಯಲಿ,
ಹನಿಯ ಸಿಂಗರಸ ಬಂದ ಹೂಬಿಸಿಲಿನಲಿ,
ನಿನ್ನ ನೆನಪು,ನಿನ್ನ ನೆನಪು,
ನನ್ನೊಲುಮೆಯ ಸ್ಫೂರ್ತಿಯೇ !
ಬಿರಿದ ಸುಂದರ ಹೂವಿನ ದಳದಲಿ,
ಪಂಚಮ ಕೋಗಿಲೆಯ ಗಾನದಲಿ,
ಸಾಲಕ್ಕಿಗಳ ಪಯಣದ ಮುಸ್ಸಂಜೆಯಲಿ,
ನಿನ್ನ ನೆನಪು ನಿನ್ನ ನೆನಪು,
ನನ್ನೊಲುಮೆಯ ಮೂರ್ತಿಯೇ !
ಇರುಳಲಿ ಮಿಂಚುವ ತಾರೆಗಳ ತೋಟದಲಿ,
ಕಾಂತಿಯುತ ಚಂದ್ರಹಾಸನ ಮಂದಹಾಸದಲಿ,
ಸುಪ್ತ ಸಮಯದ ತಂಗಾಳಿ, ಕಂಪು ಬೀರಿದಲಿ,
ನಿನ್ನ ನೆನಪು ನಿನ್ನ ನೆನಪು,
ನನ್ನೊಲುಮೆಯ ಕೀರ್ತಿಯೇ !!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ