
ದೂರದ ಸುಂದರ ನೀಲಿ ಬೆಟ್ಟ ,
ಅಡಕೆ,ಆಲು,ತೆಂಗು,ಬಾಳೆದೋಟ,
ತಂಗಾಳಿಗೆ ಚೆಂಡುವಿನ ಮೈಮಾಟ,
ಎಂತಹ ಮನಮೋಹಕ ನೋಟ,
ಸಾಲು ಮರದ ಹಸಿರ ಸೊಬಗು,
ಎಲೆಯ ಮರೆಯ ಹಕ್ಕಿಯ ಕೂಗು,
ಗಾಳಿಯ ಕಂಪನ, ಚಳಿ ಬಯಲಲಿ,
ನಯನ ಸೆಳೆದ ರತ್ನಪಕ್ಷಿಯು ಮುಗಿಲಲಿ,
ಮುಂಗಾರಿನ ಹನಿಯಲಿ ಮೈಮರೆತೆ,
ಮುಸ್ಸಂಜೆಯಲಿ ಕೆಂಪು ನೇಸರ ಕಂಡೆ,
ಹರಿವಳು ಗೊರೂರಿನಲ್ಲಿ ಹೇಮಾವತಿ,
ನಗುವ ಹಸಿರಿಗೆ ಉಸಿರಿಟ್ಟ ಜೀವೆನದಿ,
ಶಿಲ್ಪಕಲೆಗಳ ಬೇಲೂರು ಹಳೆಬೀಡು,
ಹಕ್ಕ ಬುಕ್ಕರು ಆಳಿದ ವೈಭವ ನಾಡು,
ವಿಶ್ವವಿಖ್ಯಾತ ಶ್ರವಣಬೆಳಗೊಳದ,
ಏಕಕಲ್ಲಿನ ಗೊಮ್ಮಟೇಶನ ನೆಲನಾಡು,
ಬಾಹ್ಯಾಕಾಶ ಭೂಮಿಗೂ ಸಂಪರ್ಕಿಸಿದ,
ಮುಖ್ಯ ನಿಯಂತ್ರಣ ಸೌಲಭ್ಯ ಕೇಂದ್ರದಲಿ,
ವಿಸ್ಮಯ ಮೂಡಿಸುವ ಉಪಗ್ರಹದುಡಾವಣೆ,
ನೋಡಲು ಬಲು ರೋಮಾಂಚಕರ ಸಂಗತಿ,
ಶ್ರೀರಾಮಲಿಂಗೇಶ್ವರ,ಪುರದಮ್ಮ ಹಾಸನಂಬ,
ಶ್ರೀ ರಂಗನಾಥ ದರ್ಶನ ಪಡೆದು ಪುನಿತಳಾದೆ,
ಇಂತಹ ಪ್ರಕೃತಿಯ ಸೌಂದರ್ಯ ತಾಣದ,
ಸೊಬಗನು ಸವಿದ ನಾನಿಂದು ಧನ್ಯಳಾದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ